ಪೊಲೀಸ್ ಸಿಬ್ಬಂದಿಗೆ ಆಯುಕ್ತರಿಂದ ದೇವರಾಜ್ ಅವರಿಗೆ ನಗದು ಬಹುಮಾನ
UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮುಡಿಪು: ಮುಡಿಪು ಜಂಕ್ಷನ್ ಪ್ರದೇಶದಲ್ಲಿ ಮದ್ಯರಾತ್ರಿಯ ವೇಳೆ ವಾಹನ ವ್ಯವಸ್ಥೆ ಇಲ್ಲದೆ ಬಸ್ ನಿಲ್ಧಾಣದ ಸಮೀಪವೇ ಭಯದಿಂದ ನಿಂತಿದ್ದ ಮಹಿಳೆಯನ್ನು ಕಂಡ ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ದೇವರಾಜ್ ಮಹಿಳೆಗೆ ಆಸರೆಯಾಗಿ ನಿಂತು ಸುರಕ್ಷಿತವಾಗಿ ಪೊಲೀಸ್ ವಾಹನದಲ್ಲಿ ಅವರ ಮನೆಗೆ ತಲುಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪೊಲೀಸ್ ಸಿಬ್ಬಂದಿಯ ಪ್ರಾಮಾಣಿಕತೆಯೊಂದಿಗೆ ಮನೆಗೆ ಸುರಕ್ಷಿತವಾಗಿ ತಲುಪಿದ ಬಳಿಕ ಪೊಲೀಸರ ಸೇವೆಯ ಕುರಿತು ಪೊಲೀಸ್ ಇಲಾಖೆಗೆ ಪತ್ರ ಬರೆದು ದನ್ಯವಾದವನ್ನು ಸಲ್ಲಿಸಿದ್ದರು. ಪೊಲೀಸ್ ಸಿಬ್ಬಂದಿ ದೇವರಾಜ್ ಅವರ ಕಾರ್ಯವು ಪೊಲೀಸ್ ಆಯುಕ್ತರ ಮೆಚ್ಚುಗೆಗೂ ಪಾತ್ರವಾಗಿದ್ದು ಅವರು ದೇವರಾಜ್ ಅವರಿಗೆ ಹತ್ತು ಸಾವಿರ ರೂ ನಗದು ಬಹುಮಾನದೊಂದಿಗೆ ಪ್ರಶಂಶನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಪಿ ಶೃತಿ, ಕೊಣಾಜೆ ಠಾಣಾ ಇನ್‍ಸ್ಪೆಕ್ಟರ್ ಅಶೋಕ್ ಜೊತೆಗಿದ್ದರು.