Site icon Ullalavani

ದೇರಳಕಟ್ಟೆ: ಸ್ತನ್ಯಪಾನ ಮಾಹಿತಿ ಕಾರ್ಯಾಗಾರ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ಮಗು ಎದೆಹಾಲನ್ನು ಕುಡಿಯುವ ಸಂದರ್ಭದಲ್ಲಿ ಕೆಲವೊಂದು ಮಾರ್ಗದರ್ಶಿ ಸೂತ್ರಗಳು ಅಗತ್ಯವಿದ್ದು, ಇಂತಹ ಮಾಹಿತಿಯನ್ನು ವೈದ್ಯರು ಮತ್ತು ದಾದಿಯರು ತಾಯಂದಿರಗೆ ನೀಡುವ ಕಾರ್ಯ ಮಾಡಬೇಕು ಎಂದು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ ಮುಖ್ಯಸ್ಥೆ ಡಾ| ವಿಜಯಾ ಶೆಣೈ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾನಿಲಯದ ಅಂಗಸಂಸ್ಥೆಯಾದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಆಶ್ರಯಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಸ್ತನ್ಯಪಾನ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಅವಧಿಗಿಂತ ಮೊದಲೇ ಹುಟ್ಟಿದ ಮಗುವಿಗೆ, ಸೀಳ್ದುಟಿ ಇರುವ ಮಕ್ಕಳಿಗೆ ಹಾಲುಣಿಸುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಇನ್ನೊಂದೆಡೆ ವೃತ್ತಿನಿರತ ತಾಯಂದಿರು ಕೆಲಸದ ಒತ್ತಡದಿಂದಾಗಿ ಎದೆಹಾಲನ್ನು ನೀಡೆ ಕೃತಕ ಹಾಲನ್ನು ನೀಡುವುದರಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ನಿಟ್ಟಿನಲ್ಲಿ ಮಗುವಿಗೆ ನೈಸರ್ಗಿಕ ಹಾಲನ್ನು ಕೃತಕ ಉಪಕರಣ ಬಳಸಿ ನೀಡುವ ಮಾಹಿತಿ ಈ ಕಾರ್ಯಾಗಾರದಿಮದ ನಡೆಯಲಿದ್ದು, ಪ್ರಮುಖವಾಗಿವೈದ್ಯರಿಗೆ ಮತ್ತು ದಾದಿಯರಿಗೆ ಚೆನ್ನೈಯ ನುರಿತ ತಂತ್ರಜ್ಞರು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿದ್ದಾರೆ ಎಂದರು.

ಕ್ಷೇಮಾ ಮಕ್ಕಳ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸೀಮಾ ಪಿ.ಸಿಂದ್ಘಿಕರ್ ಸ್ತನ್ಯಪಾನದ ಕುರಿತು ಮಾಹಿತಿ ನೀಡಿದರು.
ಚೆನ್ನೈನ ಸ್ತನ್ಯಪಾನ ವಿಚಾರದಲ್ಲಿ ಪರಿಣತ ತಂಡದ ಜಯಶ್ರೀ ಜಯಕೃಷ್ಣನ್ ಡಾ| ಮೀನಾಕ್ಷಿ ಜೆ, ಡಾ| ಸುಬ್ರಮಣಿಯನ್ ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ| ಸುಮಂತ್ ಶೆಟ್ಟಿ, ಡಾ| ಸೌಮ್ಯಾ ಎಸ್.ಜಿ, ಕಾರ್ಯಕ್ರಮ ಸಂಯೋಜಕಿ ಡಾ| ರತಿಕಾ ಉಪಸ್ಥಿತರಿದ್ದರು.

Exit mobile version