Site icon Ullalavani

ಆಯುರ್ವೇದದಲ್ಲಿ ಆಹಾರದ ಪದ್ಧತಿ ಎಂಬ ವಿಷಯದ ಬಗ್ಗೆ ಮಾಹಿತಿ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಕಿನ್ಯ: ರೋಗ ಬಂದ ಮೇಲೆ ಮದ್ದು ತೆಗೆದು ಕೊಳ್ಳುವುದಕ್ಕಿಂತ ರೋಗ ಬರದ ಹಾಗೆ ಯಾವ ರೀತಿ ಮಾಡಬಹುದು ಎನ್ನುವ ಚಿಂತನೆ ಆಗತ್ಯವಿದೆ ಎಂದು ದೇವಿನಗರ ತಲಪಾಡಿಯ ಶಾರದಾ ಆಯುರ್ವೇದ ಆಸ್ಪತ್ರೆಯ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ರವಿ ಗಣೇಶ್ ಮೊಗ್ರಾ ಆಭಿಪ್ರಾಯಪಟ್ಟರು.

ಅವರು ಕೇಶವ ಶಿಶು ಮಂದಿರ ಕಿನ್ಯದಲ್ಲಿ ನಡೆದ ಆಯುರ್ವೇದದಲ್ಲಿ ಆಹಾರದ ಪದ್ಧತಿ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಆಯುರ್ವೇದದಲ್ಲಿ ಆಹಾರದ ಒಂದು ವಿಧಿ ವಿಧಾನವಿದ್ದು, ಹೇಗೆ ಮನುಷ್ಯ ಬ್ರಾಹ್ಮಿ ಮೂಹೂರ್ತದಲ್ಲಿ ಎದ್ದು ಮಾಡಬಹುದಾದಂತಹ ಕೆಲಸ ಕಾರ್ಯಗಳು, ಅದರಂತೆ ಋತುಗಳಿಗನುಸಾರವಾಗಿ ಬಳಸಬಹುದಾದಂತಹ ಆಹಾರಗಳು, ಸಂಪ್ರದಾಯವಾಗಿ ಇರುವಂತಹ ಕ್ರಮಗಳನ್ನು ಅನುಸರಿಸಿದರೆ ರೋಗ ಬರದಂತೆ ತಡೆಯಲು ಅನುಕೂಲವಾಗುತ್ತದೆ. ಉಷ್ಣ-ಶೀತ ಆಹಾರಗಳು, ಹಾನಿಕಾರಕ ಅದೇ ರೀತಿ ಮೀನು ಮತ್ತು ಹಾಲು ಒಟ್ಟಿಗೆ ಸೇವಿಸಿದರೆ ಅದರಿಂದಾಗುವ ಕೆಡುಕುಗಳಾಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವಂತಹ ಬೇಕರಿ ಉತ್ಪನ್ನಗಳಲ್ಲಿ ಮೈದಾವನ್ನು ಬಳಸುತ್ತಾರೆ. ಈ ಮೈದಾವನ್ನು ಬೆನ್ ಜೋಯಸ್ ಪೆರಾಕ್ಸಡ್ ಎಂಬ ರಾಸಾಯನಿಕದಲ್ಲಿ ತೊಳೆದು ಬಿಳಿ ಬಣ್ಣವಾಗುವಂತೆ ಮಾಡುತ್ತಾರೆ. ಇದು ಕ್ಯಾನ್ಸರ್ ಕಾರಕವಾಗಿರುತ್ತದೆ ಅದರಂತೆ ಎಲೋಕ್ಸಿನ್ ಎಂಬ ಕೆಮಿಕಲ್ ಹಾಕಿದಾಗ ಮೈದಾ ಮೆತ್ತಗಾಗುವಂತೆ ಮಾಡುತ್ತಾರೆ. ಈ ಕೆಮಿಕಲ್ ಕೂಡಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದುದರಿಂದ ಪ್ರಕೃತಿದತ್ತವಾಗಿ ಸಿಗುವಂತಹ ಆಹಾರಗಳು, ತರಕಾರಿಗಳು ಆದಷ್ಟು ಹಳ್ಳಿ ಪ್ರದೇಶಗಳಲ್ಲಿ ತಾವೇ ತರಕಾರಿಗಳನ್ನು ಬೆಳೆಯುವಂತಾಗಬೇಕು, ಮನೆಯಲ್ಲಿಯೇ ಸಾಕಿದ ದನದ ಹಾಲು, ಅದರಲ್ಲಿ ಉತ್ಪಾದಿಸುವ ತುಪ್ಪ, ಹಣ್ಣುಗಳನ್ನು ಬಳಸುವಾಗ ಉಪ್ಪು ಹಾಕಿ ಬಿಸಿ ನೀರಿನಿಂದ ತೊಳೆಯಬೇಕು. ಹೀಗೆ ಆರ್ಯುವೇದದಲ್ಲಿ ತಿಳಿಸಿದಂತೆ ಆಹಾರವನ್ನು ಬಳಸಬೇಕು. ನಮ್ಮ ಹಳೇ ಸಂಪ್ರದಾಯಗಳನ್ನು ಬಿಡಬಾರದು. ನಮ್ಮ ಸಂಸ್ಕøತಿಯಲ್ಲಿ ಹೇಳಿದಂತೆ ಕ್ರಮಗಳನ್ನು ಅನುಸರಿಸಿದರೆ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಸಂಚಾಲಕ ದೇವದಾಸ್ ಉಚ್ಚಿಲ್ , ಮಾಯಾ ದೇವದಾಸ್ ದಂಪತಿಗಳು ಉಪಸ್ಥಿತರಿದ್ದರು.

ಶಿಶು ಮಂದಿರದ ಪುಟಾಣಿಗಳು ಪ್ರಾರ್ಥನೆ ಮಾಡಿದರು. ಸೌಮ್ಯ ಹರೀಶ್ ಸ್ವಾಗತಿಸಿದರು. ಮಮತಾ ಚೇತನ್ ವಂದಿಸಿದರು. ಭಗಿನಿ ರೂಪಾ ಮಾತಾಜಿ ಶಾಂತಿ ಮಂತ್ರ ಹೇಳಿದರು.

ಈ ಸಂದರ್ಭ ಬೋವಿ ವಿದ್ಯಾಸಂಸ್ಥೆಯ ಸಂಚಾಲಕ ದೇವದಾಸ್ ಉಚ್ಚಿಲ್ ದಂಪತಿಗಳ ಮಗುವಿನ ಹುಟ್ಟುಹಬ್ಬದ ನಿಮಿತ್ತ ಶಿಶು ಮಂದಿರದ ಮಕ್ಕಳಿಗೆ ಆರತಿ ಬೆಳಗಿ, ಅನ್ನದಾನವನ್ನು ನೀಡಿ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು.

 

Exit mobile version