Site icon Ullalavani

ಸಹೋದರರಿಬ್ಬರಿಗೆ ಚೂರಿತ ಇರಿತ: ಇಬ್ಬರು ವಶಕ್ಕೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸಹೋದರರಿಬ್ಬರಿಗೆ ಚೂರಿತ ಇರಿತ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾಸ್ತಿಕಟ್ಟೆ ಸಂಚರಿಸುತ್ತಿದ್ದ ಉಳ್ಳಾಲ ನಿವಾಸಿ ಪ್ರಸ್ತುತ ಕಲ್ಲಾಪು ಪಟ್ಲದಲ್ಲಿ ವಾಸವಾಗಿರುವ ಸಮೀರ್ ಮತ್ತು ಆತನ ಸಹೋದರ ಸಿರಾಜ್‍ಗೆ ಇಲ್ಯಾಸ್ ಯಾನೆ ಟಾರ್ಗೆಟ್ ಇಲಿಯಾಸ್‍ನ ತಂಡಕ್ಕೆ ಸೇರಿದ ಸುರ್ಮಾ ಇಮ್ರಾನ್ ಚೂರಿಯಿಂದ ಇರಿದಿದ್ದು, ಅಲ್ತಾಫ್ ಕಾಟಿಪಳ್ಳ, ಹಂಝ ಸಹಾಯ ಮಾಡಿದ್ದರೆಂದು ಗಾಯಗೊಂಡಿದ್ದ ಸಹೋದರರು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆಗೆ ಸಂಬಂಧಿಸಿದ ಪ್ರಮುಖ ಆರೋಪಿ ಸುರ್ಮಾ ಇಮ್ರಾನ್ ಮತ್ತು ಹಂಝನನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿಸಿದ್ದಾರೆ.

ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಗಾಯಾಳು ಪರ ತಂಡ ಪೋಲಿಸ್ ಠಾಣೆಯ ಎದುರು ಜಮಾಯಿಸಿದ್ದರು. ಆರೋಪಿಗಳಿಗೆ ರಾಜಕೀಯ ರಕ್ಷಣೆ ನೀಡಲಾಗುತ್ತಿದೆ ಎಂದು ಸಮೀರ್ ಸಂಬಂಧಿಕರು ಆರೋಪಿಸಿದ್ದಾರೆ. ಉಳ್ಳಾಲ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version