ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದಲ್ಲಿ ಮಾ. 11 ಶನಿವಾರದಿಂದ 17 ಶುಕ್ರವಾರದ ವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ
ಮಾ. 11 ಶನಿವಾರದಂದು ರಾತ್ರಿ 10.30ಕ್ಕೆ ಪಟ್ಟ ಸಿಂಹಾಸನದಿಂದ ಮೂಡಮಾಡಕ್ಕೆ `ಕಿರೋಳ್ ಉತ್ಸವ ನಡೆಯಲಿದ್ದು 12ರಂದು ರವಿವಾರ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಉತ್ಸವ, 13ರಂದು ಸೋಮವಾರ ಶ್ರೀ ಧರ್ಮಅರಸರ ವಲಸರಿ ಉತ್ಸವ, 15ರಂದು ಬುಧವಾರ ಶ್ರೀ ಧರ್ಮ ಅರಸರ ದೊಡ್ಡ ವಲಸರಿ ಉತ್ಸವ ನಡೆಯಲಿದ್ದು 16ರಂದು ಗುರುವಾರ ರಾತ್ರಿ10.30ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಮತ್ತು ಕೆರೆ ದೀಪೋತ್ಸವ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.