ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ತೊಕ್ಕೊಟ್ಟು ವ್ಯಾಪ್ತಿಯಲ್ಲಿ ನಿರಂತರವಾಗಿ ಅಗ್ನಿ ಅವಘಢಗಳು ಸಂಭವಿಸುತ್ತಿದ್ದು, ಘಟನೆಗಳಿಗೆ ಸಂಬಂಧಿಸಿ ಸೂಕ್ಷ್ಮ ತನಿಖೆ ಹಾಗೂ ಕೋಮುಭಾವನೆ ಕೆರಳಿಸಲು ಯತ್ನಿಸುವವರನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಆಗ್ರಹಿಸಿದೆ.
ಘಟನೆ ನಡೆದ ಮೂರೇ ದಿನಗಳಲ್ಲಿ ಮತ್ತೆ ಅಗ್ನಿ ಅವಘಢಗಳು ಸಂಭವಿಸುತ್ತಲೇ ಬಂದಿದೆ. ಮಂಗಳವಾರ ತಡರಾತ್ರಿ ಬಾಂಬೆ ಬಝಾರಿಗೆ ಬೆಂಕಿ ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಎಂ ಉಳ್ಳಾಲ ವಲಯ ಸದಸ್ಯರು, ಹಿಂದೆ ನಡೆದ ಘಟನೆಗಳಿಗೆ ಮತ್ತು ಸದ್ಯ ನಡೆದಿರುವ ಘಟನೆಗಳಿಗೆ ಸಾಮ್ಯತೆ ಇರುವುದಾಗಿ ತಿಳಿಸಿದ್ದಾರೆ.
ಅಂಗಡಿಯೊಳಗಿದ್ದ ಲಕ್ಷಾಂತರ ಬೆಲೆಬಾಳುವ ಸೊತ್ತುಗಳೆಲ್ಲವೂ ಹೊತ್ತಿ ಉರಿದಿವೆ. ಅಂಗಡಿ ಹಿಂಭಾಗದಲ್ಲಿ ಮುಳಿ ಹುಲ್ಲಿನ ಗುಡ್ಡೆಯಲ್ಲಿ ವಿದ್ಯುತ್ ಕಂಬಗಳಿದ್ದು, ಅಲ್ಲಿ ಶಾಟ್ ್ ಸಕ್ರ್ಯೂಟ್ ಆಗಿ ಬೆಂಕಿ ಬಿದ್ದು ಅಂಗಡಿ ಉರಿದಿದೆ ಅನ್ನುವ ಪ್ರಚಾರ ಪಡೆಯುತ್ತಿದೆ. ಆದರೆ ಒಳಗಿಂದ ಮೈನ್ ಸ್ವಿಚ್ಡ್ ಆಫ್ ಮಾಡಿರುವುದು ಅಂಗಡಿ ಮಾಲೀಕರ ಹೇಳಿಕೆಯಾಗಿದೆ. ಕಂಬದಿಂದ ಆಗಿದ್ದಲ್ಲಿ ಸುತ್ತಲೂ ಇರುವ ಒಣ ಹುಲ್ಲಿಗೂ ಬೆಂಕಿ ಬೀಳಬೇಕಿತ್ತು. ಒಟ್ಟು ಘಟನೆಯಲ್ಲಿ ಸಂಶಯವಿದ್ದು, ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.