Site icon Ullalavani

ಮಾಸ್ತಿಕಟ್ಟೆಯಲ್ಲಿ ಚೂರಿ ಇರಿತ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಮಾಸ್ತಿಕಟ್ಟೆ: ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರನ್ನು ಅಡ್ಡಗಟ್ಟಿದ ತಂಡವೊಂದು ಓರ್ವನಿಗೆ ಚೂರಿಯಿಂದ ಇರಿದು ಕೊಲೆಗೆ ಯತಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಎಂಬಲ್ಲಿ ಗುರುವಾರ ಸಂಜೆ ವೇಳೆ ಸಂಭವಿಸಿದೆ.


ಗಾಯಳುಗಳನ್ನು ಮುಕ್ಕಚ್ಚೆರಿ, ಕಿಲೇರಿಯಾ ನಗರ ನಿವಾಸಿಗಳಾದ ಸಮೀರ್ (25), ಸಿರಾಜ್(26) ಎಂಬವರು ಚೂರಿ ಇರಿತಕ್ಕೆ ಒಳಗಾದವರಾಗಿದ್ದಾರೆ. ಇವರಿಗೆ ಸುರ್ಮಾ ಇಮ್ರಾನ್, ಹಂಝು, ಅಲ್ತಾಫ್ ಕಾಟೀಪಳ್ಳ ಸೇರಿದ ತಂಡ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ.

ಪೂರ್ವದ್ವೇಷದ ಹಿನ್ನಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ಗಾಯಾಳುಗಳು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version