Site icon Ullalavani

ಪೆರ್ಮನ್ನೂರು: ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಪೆರ್ಮನ್ನೂರು: ವಿಶ್ವದಂತ ವೈದ್ಯರ ದಿನಾಚರಣೆ ಅಂಗವಾಗಿ ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ ಪೆರ್ಮನ್ನೂರು ಅಡಂಕುದ್ರುವಿನ ಸಂತ ಸೆಬಾಸ್ಟಿಯನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.

ಚೂಂತಾರು ಸರೋಜಿನಿ ಪ್ರತಿಷ್ಠಾನನ ಟ್ರಸ್ಟಿ ಡಾ. ರಾಜಶ್ರೀ ಮೋಹನ್ ಮಾತನಾಡಿ ಸುಂದರವಾದ ಸುದೃಢವಾದ ಹಲ್ಲು ಆರೋಗ್ಯದ ಸಂಕೇತ. ಆರೋಗ್ಯವಂತ ಹಲ್ಲು ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತೀ ಅವಶ್ಯಕ. ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹಲ್ಲಿನ ಪರೀಕ್ಷೆ ಮಾಡಿಸಿಕೊಳ್ಳಿ. ಹಲ್ಲಿನ ಆರೋಗ್ಯಕ್ಕೆ ಮತ್ತು ದೇಹದ ಆರೋಗ್ಯಕ್ಕೆ ಪೂರಕವಾದ ಹಸಿ ತರಕಾರಿ ಹಣ್ಣು ಹಂಪಲುಗಳನ್ನು ಹೆಚ್ಚು ತಿನ್ನಬೇಕು. ಜಂಕ್ ಫುಡ್‍ಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

ಶಾಲಾ ಮುಖ್ಯ ಶಿಕ್ಷಕಿ ಲೀಡಿಯಾ ಡಿಸೋಜ, ಶಿಕ್ಷಕಿಯರುಗಳಾದ ಕವಿತ ಮತ್ತು ಸುಮಾ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಉಪಸ್ಥಿತರಿದ್ದರು.

ಇದೇ ಸಂದರ್ಭ ಪ್ರತಿಷ್ಠಾನದ ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕಗಳನ್ನು ನೀಡಲಾಯಿತು. ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ಟೂತ್‍ಪೇಸ್ಟ್ ಮತ್ತು ಟೂತ್‍ಬ್ರಶ್ ಹಂಚಲಾಯಿತು.

ಶಾಲಾ ಶಿಕ್ಷಕಿ ಸುಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಲೀಡಿಯಾ ಡಿಸೋಜ ವಂದಿಸಿದರು.

Exit mobile version