ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ವಾಜಪೇಯಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 100 ಮನೆಗಳ ವಿತರಿಸುವ ಯೋಜನೆಯಿದ್ದು, ಉಳ್ಳಾಲ ಮತ್ತು ಮಂಗಳೂರು ಕ್ಷೇತ್ರದ ಅಭಿವೃದ್ಧಿಗೆ ಸುಮಾರು 260 ಕೋಟಿ ಅನುದಾನ ನೀಡಲಾಗಿದೆ ಎಂದು ಎಂದು ರಾಜ್ಯ ಲೋಕೋಪಯೋಗಿ ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ| ಎಚ್.ಸಿ.ಮಹಾದೇವಪ್ಪ ತಿಳಿಸಿದರು.
ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮತ್ತು ಮಂಗಳೂರು ದಕ್ಷಿಣ ಕ್ಷೇತ್ರದ ಜೆ.ಆರ್. ಲೋಬೋ ಅವರ ಕೇಲಿಕೆಯಯ ಮೇರೆಗೆ ಹಲವಾರು ಅನುದಾನಗಳನ್ನು ಬಿಡುಗಡೆ ಮಾಡಿದ್ದು, ಕರಾವಳಿ ರಕ್ಷಣೆ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ಇಲ್ಲಿಗೆ ಹರಿದು ಬರಲಿದೆ. ಉಳ್ಳಾಲಕ್ಕೆ ಈಗಾಗಲೇ ನಗರೋತ್ಥಾನ ಅನುದಾನದಡಿ 25 ಕೋಟಿ ಬಿಡುಗಡೆಯಾಗಿದ್ದು, 10 ಕೋಟಿಯಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಲಾಗಿದ್ದ 165 ಭರವಸೆಗಳ ಪೈಕಿ 135 ಈಡೇರಿಸಲಾಗಿದ್ದು, ಇನ್ನುಳಿದ ಭರವಸೆಗಳನ್ನು 2018ರೊಳಗೆ ಈಡೇರಿಸಿ ಮತ್ತೆ ಕಾಂಗ್ರೆಸ್ ಅ„ಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ ಉಳ್ಳಾಲದಲ್ಲಿ ಹಲವು ವರ್ಷಗಳ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನ ದೊರಕ್ಕಿದ್ದು, ತೊಕ್ಕೊಟ್ಟಿನಿಂದ ಅಬ್ಬಕ್ಕ ವೃತ್ತದವರೆಗೆ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಇಕ್ಕೆಲೆಗಳಲ್ಲಿ ಫುಟ್‍ಪಾತ್, ವಾಕಿಂಗ್ ಟ್ರ್ಯಾಕ್, ವಿದ್ಯುತ್ ದೀಪ ಅಳವಡಿಸಿ ರಾಜಮಾರ್ಗವನ್ನಾಗಿಸುವ ನಿಟ್ಟಿನಲ್ಲಿ ಐದು ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಬ್ಬಕ್ಕ ವೃತ್ತದಿಂದ ಮುಕಚ್ಚೇರಿ ರಸ್ತೆ ಅಭಿವೃದ್ಧಿಗೆ ಐದು ಕೋಟಿ ಬಿಡುಗಡೆಗೊಂಡಿದ್ದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಉಳ್ಳಾಲ ಮಾದರಿ ನಗರವಾಗಿ ನಿರ್ಮಾಣಗೊಳ್ಳಲಿದೆ ಎಂದರು.
ಕಾರ್ಯಕ್ರಮದಲ್ಲಿ 3.72 ಕೋಟಿ ಮೊತ್ತದ ವಿವಿಧ ಸವಲತ್ತು ಫಲಾನುಭವಿಗಳಿಗೆ ವಿತರಿಸಲಾಯಿತು.
ಶಾಸಕ ಜೆ.ಆರ್.ಲೋಬೋ, ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಪಾಧ್ಯಕ್ಷೆ ಚಿತ್ರಾಕ್ಷಿ, ನಗರಸಭಾ ಸದಸ್ಯರಾದ ಫಾರೂಕ್ ಉಳ್ಳಾಲ್, ಮುಸ್ತಫಾ ಅಬ್ದುಲ್ಲಾ, ರಝಿಯಾ ಇಬ್ರಾಹಿಂ, ಬಾಝಿಲ್ ಡಿ.ಸೋಜ, ವಿವಿಧ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು. ಯು.ಎ.ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು.
ಚೆಕ್ ವಿತರಣೆ :
ಉಳ್ಳಾಲದಲ್ಲಿ ಕೋಮು ಸಂಘರ್ಷಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಂದ ಕೊಲೆಗೀಡಾದ ರಾಜು ಮಗೊಗವೀರಪಟ್ಣ ಮತ್ತು ಮಹಮ್ಮದ್ ಸಫ್ವಾನ್ ಅವರಿಗೆ ಈ ಹಿಂದೆ ಘೋಷಣೆಯಾದಂತೆ ಕಂದಾಯ ಇಲಾಖೆಯಿಂದ ತಲಾ 5 ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು.