ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮುಂಬೈ: ದೇಶದೆಲ್ಲೆಡೆ ನೋಟು ಬ್ಯಾನ್ ಬಿಸಿ ಕಡಿಮೆಯಾಗುತ್ತಿದ್ದಂತೆ ಇದೀಗ ಎಸ್‌ಬಿಐ ಬ್ಯಾಂಕ್ ಹೊಸದೊಂದು ನೀತಿಯನ್ನು ಪ್ರಕಟಿಸುವ ಮೂಲಕ ಜನರಿಗೆ ದೊಡ್ಡ ಶಾಕ್ ನೀಡಿದೆ.
ನಿಮ್ಮ ಉಳಿತಾಯದ ಖಾತೆಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಮೊತ್ತಕ್ಕೂ ಕಡಿಮೆ ಹಣವಿದ್ದರೆ ಅಂದರೆ ಕನಿಷ್ಠ 5 ಸಾವಿರ ರು ಠೇವಣಿ ಇಲ್ಲದಿದ್ದರೆ ದಂಡ ಬೀಳಲಿದೆ.
ಏಪ್ರಿಲ್ 1 ರಿಂದ ನೀತಿ ಜಾರಿಗೆ ಬರಲಿದ್ದು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಮೆಟ್ರೋಪಾಲಿಟನ್ ನಗರಗಳಲ್ಲಿ ಈ ದಂಡದ ಮೊತ್ತ ಹೆಚ್ಚಿರಲಿದೆ. ಮೆಟ್ರೋಪಾಲಿಟನ್ ನಗರಗಳಲ್ಲಿ ಮಾಸಿಕ ಸರಾಸರಿ 5 ಸಾವಿರ, ನಗರಗಳಲ್ಲಿ 3 ಸಾವಿರ, ಅರೆನಗರಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1000 ರುಪಾಯಿ ಠೇವಣಿ ಹೊಂದಿರಬೇಕು.
ಮೆಟ್ರೋ ಸಿಟಿಯ ಗ್ರಾಹಕರು ಖಾತೆಯಲ್ಲಿ 5 ಸಾವಿರ ಮೊತ್ತ ಇರಲೇಬೇಕು. ಅದು ಶೇ.50ರಷ್ಟು ಕಡಿಮೆ ಆಯಿತೆಂದರೆ 50 ರುಪಾಯಿ ತಂಡದ ಜತೆಗೆ ಸೇವಾ ತೆರಿಗೆಯನ್ನು ಕಟ್ಟಬೇಕು. ಇನ್ನು ಶೇ. 70ರಷ್ಟು ಕಡಿಮೆ ಆದರೆ 75 ರುಪಾಯಿ ಮತ್ತು ಸೇವಾ ತೆರಿಗೆ ಕಟ್ಟಬೇಕು. ಒಂದು ವೇಳೆ ಶೇ.75ಕ್ಕಿಂತ ಹೆಚ್ಚು ಹಣ ತೆಗೆದರೆ 100 ರುಪಾಯಿ ಜತೆಗೆ ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.