Site icon Ullalavani

ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ :ಎಳೆ ಮಕ್ಕಳ ಮಾಂಸಖಂಡಗಳಲ್ಲಿ ನೋವು, ಚರ್ಮದ ಗುಳ್ಳೆಗಳು ಮತ್ತು ಜ್ವರ ಕಾಣಿಸಿಕೊಂಡರೆ ಅಂತಹ ಮಕ್ಕಳನ್ನು ತಜ್ಞರು ಸರಿಯಾಗಿ ಪರೀಕ್ಷಿಸುವ ಮೂಲಕ ಮಕ್ಕಳು ಸಂಧಿವಾತಕ್ಕೆ ತುತ್ತಾಗದಂತೆ ಶುಶ್ರೂಷೆ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕ್ಷೇಮ ಕುಲಸಚಿವ ಡಾ.ಜಯಪ್ರಕಾಶ್ ಶೆಟ್ಟಿ ಹೇಳಿದ್ದಾರೆ.

ಅವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ ಜರಗಿದ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಕೆಲವೊಂದು ಸಂಸ್ಥೆಗಳು ಮಾತ್ರ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೀಲುರೋಗ ನೋವಿನ ¨ಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಪ್ರತಿಯೊಂದು ವೈದ್ಯಕೀಯ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಳ್ಳುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಭಾರತೀಯ ಪೀಡಿಯಾಟ್ರಿಕ್ಸ್ ಅಕಾಡೆಮಿಯ ಚುನಾಯಿತ ಅಧ್ಯಕ್ಷ ಡಾ.ಸಂತೋಷ್ ಸೋನ್ಸ್, ಎಸ್.ಕೆ.ಬ್ರಾಂಚಿನ ಪೀಡಿಯಾಟ್ರಿಕ್ಸ್ ಅಕಾಡೆಮಿ ಅಧ್ಯಕ್ಷ ಡಾ.ಮೇಜರ್ ರಾಜೇಶ್, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಡಾ. ಆನಂದ ರಾವ್, ಕೊಚ್ಚಿ ಅಮೃತ ವೈದ್ಯಕೀಯ ಕಾಲೇಜಿನ ಡಾ.ಸುಮಾ ಬಾಲನ್, ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ಡಾ.ಸಜ್ಜನ್ ಶೆಣೈ, ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಡಾ.ರತಿಕಾ ಶೆಣೈ ಉಪಸ್ಥಿತರಿದ್ದರು.

ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಶೆಣೈ ಸ್ವಾಗತಿಸಿದರು. ಡಾ. ಸುಮಂತ್ ಶೆಟ್ಟಿ ವಂದಿಸಿದರು.

Exit mobile version