ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ : ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವತಿಯಿಂದ ತಖ್ವೀಯ ಟೋಪ್ ಟೆನ್ ಯೂನಿಟ್ ಲೀಡರ್ಸ್ ಮೀಟ್ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷ ಮನ್ಸೂರು ಹಿಮಮಿ ಮೊಂಟೆಪದವು ಉಸ್ತಾದರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಮರಿಕ್ಕಳ ಶಾಖಾ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಎಸ್.ವೈ.ಎಸ್ ನಾಯಕರಾದ ಖಾಲಿದ್ ಹಾಜಿ ಭಟ್ಕಳ, ಅಝೀಝ್ ಮೊಂಟೆಪದವು, ಮೋಂಟುಗೋಳಿ ಸೆಕ್ಟರ್ ನಾಯಕರಾದ ನಾಸಿರ್ ಮೊಂಟುಗೋಳಿ, ಸಿರಾಜ್ ನಡುಪದವು, ಮುಸ್ತಫಾ ನಡುಪದವು, ನಿಯಾಝ್ ಪಡಿಕ್ಕಲ್, ಸಿರಾಜ್ ಪಡಿಕ್ಕಲ್, ಸಿನಾನ್ ಸುಟ್ಟ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಹಾಗೂ ಸೆಕ್ಟರ್ ಉಸ್ತುವಾರಿ ಫಾರೂಕ್ ಸಖಾಫಿ ಮದನಿನಗರರವರನ್ನು ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಸ್ವಾಗತಿಸಿದರು. ಸೆಕ್ಟರ್ ಕಾರ್ಯದರ್ಶಿ ಸಂಶುದ್ದೀನ್ ಮೊಂಟೆಪದವು ವಂದಿಸಿದರು.