ಉಳ್ಳಾಲ ನ್ಯೂಸ್ ನೆಟ್ ವರ್ಕ್
ಸ್ನಾತಕೋತ್ತರ ವಿಭಾಗದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದೀವಿತ್ ಎಸ್ .ಕೋಟ್ಯಾನ್ ಅವರಿಗೆ ಪ್ರಥಮ ರ?ಯಾಂಕ್ನೊಂದಿಗೆ ಎರಡು ಚಿನ್ನದ ಪದಕ ಹಾಗೂ ಎರಡು ನಗದು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪೆರಾಡಿಯ ಶ್ರೀಧರ ಕೋಟ್ಯಾನ್ ಹಾಗೂ ಲಲಿತಾ ದಂಪತಿಯ ಪುತ್ರರಾಗಿರುವ ದೀವಿತ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು ಉನ್ನತ ಸಾಧನೆ ಮಾಡಿದ್ದಾರೆ.
ಅಲ್ಲದೆ ಯಕ್ಷಗಾನ ಕಲಾವಿದನೂ ಆಗಿರುವ ದೀವಿತ್ ಈಗಾಗಲೇ ಸುಮಾರು 300-350ಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿ ಯಶಸ್ವಿ ಕಲಾವಿದನೆನಿಸಿಕೊಂಡಿದ್ದಾರೆ.
ಸಮೂಹ ಸಂವಹನ ಹಾಗೂ ಪತ್ರಿಕೋಧ್ಯಮ ವಿಭಾಗದಲ್ಲಿ ಪ್ರಥಮ ರ್ಯಾಂಕಿನೊಂದಿಗೆ, ಡಾ.ಟಿ.ಎಂ.ಎ.ಪೈ ದತ್ತಿ ಚಿನ್ನದ ಪದಕ ಮತ್ತು ದಿ.ಶ್ರೀ ರಾಮಕೃಷ್ಣ ಮಲ್ಯ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ. ಹಾಗೂ ಇದರೊಂದಿಗೆ ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್ 1988 ಮತ್ತು ಪಬ್ಲಿಕ್ ರಿಲೇಷನ್ ಸೊಸೈಟಿ ಆಫ್ ಇಂಡಿಯಾ ನಗದು ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.
ಸದ್ಯ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಆಳ್ವಾಸ್ ದೀಂಕಿಟ ಯಕ್ಷಗಾನ ಅಧ್ಯನಯನ ಕೇಂದ್ರದ ಸಂಯೋಜಕನಾಗಿ ಕಾರ್ಯ ನಿರ್ವಹಿಸುತ್ತಿರುವ ದೀವಿತ್ ಅವರು ನಾವು ಶಿಕ್ಷಣದ ಜೊತೆಗೆ ಇತರ ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎನ್ನುತ್ತಾರೆ. ಅಲ್ಲ ನನ್ನ ಇಂದಿನ ಈ ಗೌರವಕ್ಕೆ ತಂದೆ ತಾಯಿ ಹಾಗೂ ಆಳ್ವಾಸ್ ಕಾಲೇಜಿನ ಡಾ.ಮೋಹನ್ ಆಳ್ವಾ ಅವರೇ ಪ್ರೇರಣೆಯಾಗಿದ್ದಾರೆ ಎನ್ನುತ್ತಾರೆ ದೀವಿತ್ ಕೋಟ್ಯಾನ್.
ಆಟೋ ಚಾಲಕನ ಮಗನಿಗೆ ಚಿನ್ನದ ಪದಕ
`ತಂದೆ ಆಟೋ ಚಾಲಕರಾಗಿದ್ದರೂ ಕೂಡಾ ನನ್ನ ಶಿಕ್ಷಣಕ್ಕೆ ಯಾವುದೇ ಅಡ್ಡಿ ಪಡಿಸದೆ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ನನಗೆ ಚಿಕ್ಕಂದಿನಿಂದಲೇ ಉತ್ತಮ ಶಿಕ್ಷಣವನ್ನು ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬ ಕನಸು ಇತ್ತು. ಇದೀಗ ಕನ್ನಡ ಎಂಎಯಲ್ಲಿ ರ?ಯಾಂಕ್ ಬಂದು ನಗದು ಪುರಸ್ಕಾರದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ನನ್ನ ಸಾಧನೆಗೆ ಪ್ರೇರಣೆಯಾದ ತಂದೆ ತಾಯಿ, ಅಧ್ಯಾಪಕ ವೃಂದಕ್ಕೆ ನಾನು ಚಿರಋಣಿಯಾಗಿದ್ದೇನೆ’.
ಮಡಿಕೇರಿ ಮೂಲದ ಹಸೈನಾರ್ ಹಾಗೂ ಜುಬೈದಾ ದಂಪತಿಯ ಪುತ್ರರಾಗಿರುವ ಮುಸ್ತಾಫಾ ಅವರು ಪದವಿಯವರೆಗೆ ಮಡಿಕೇರಿಯಲ್ಲಿಯೇ ವ್ಯಾಸಾಂಗ ಮುಗಿಸಿ ಬಳಿಕ ಸ್ನಾತಕೋತ್ತರ ಪದವಿಗಾಗಿ ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿದ್ದರು. ತಂದೆ ವೃತ್ತಿಯಲ್ಲಿ ಆಟೊ ಚಾಲನೆ ಮಾಡಿ ಸಂಸಾರವನ್ನು ನೋಡಿಕೊಳ್ಳುತ್ತಿದ್ದರು. ವಿವಿಧ ಸ್ಕಾಲರ್‍ಶಿಪ್‍ಗಳು ಪಡೆದುಕೊಂಡು ಉನ್ನತ ಶಿಕ್ಷಣಕ್ಕೆ ಕಾಲಿಟ್ಟ ಮುಸ್ತಾಫಾ ಅವರಿಗೆ ಎರಡು ವರ್ಷ ಉಳಿದುಕೊಳ್ಳಲು ಬಿಸಿಎಂ ಹಾಸ್ಟೆಲ್ ಕೂಡಾ ಸಿಕ್ಕಿದ್ದು ವಿದ್ಯಾಭ್ಯಾಸಕ್ಕೆ ಬಹಳಷ್ಟು ಅನುಕೂಲವಾಯಿತು.
ಶಿಕ್ಷಣದೊಂದಿಗೆ ಇನ್ನಿತರರ ಹಲವಾರು ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಅಧ್ಯಾಪಕರುಗಳ ಮಾರ್ಗದರ್ಶನದೊಂದಿಗೆ ಕನ್ನಡ ಎಂಎಯಲ್ಲಿ ರ?ಯಾಂಕ್ ಗಳಿಸಿ ಗೋಲ್ಡ್‍ಮೆಡಲ್ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ.
ಅಲ್ಲದೆ, ಚಿನ್ನದ ಪದಕದೊಂದಿಗೆ ಶ್ರೀ ಕೆರೋಡಿ, ಸುಬ್ಬರಾವ್ ಸ್ಮಾರಕ ನಗದು ಪುರಸ್ಕಾರ, ದಿ.ಬಿ.ಎನ್.ಗುಪ್ತ ಟ್ರಸ್ಟಿ ಜನ್ಮಭೂಮಿ ಪ್ರೆಸ್ ಟ್ರಸ್ಟ್ ಮೆಮೋರಿಯಲ್ ನಗದು ಪುರಸ್ಕಾರ, ಡಾ.ಬಿ.ಆರ್.ದಾಮೋದರ್ ರಾವ್ ನಗದು ಪುರಸ್ಕಾರ, ಗೋಲ್ಡನ್ ಜುಬ್ಲಿ ಕನ್ನಡ ಫಿಲ್ಮ್ ಫೆಸ್ಟಿವಲ್ ಮೆಮೋರಿಯಲ್ ನಗದು ಪ್ರಶಸ್ತಿ ಮತ್ತು ಶ್ರೀಮತಿ ವಸಂತ ಎಸ್ ಅನಂತನಾರಾಯಣ ಮತ್ತು ಪೆÇ್ರ.ಎಸ್.ಅನಂತ ನಾರಾಯಣ ನಗದು ಪ್ರಶಸ್ತಿಯನನ್ನು ಕೂಡಾ ಮುಸ್ತಾಫಾ ಅವರು ಪಡೆದುಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡ ಎಂ.ಎ.ಯನ್ನು ಮುಗಿಸಿ ಇದೀಗ ಕನ್ನಡ ಅಧ್ಯಯನ ವಿಭಾಗದಲ್ಲಿ ಪಿಎಚ್‍ಡಿಗಾಗಿ ಸೇರ್ಪಡೆಗೊಂಡಿರುವ ಮುಸ್ತಾಫಾ ಈಗಾಗಲೇ ಹಲವಾರು ಸಂಶೋಧನಾ ಬರಹಗಳ ಜೊತೆಗೆ `ಕಂಡದ್ದು ಕಾಡಿದ್ದು’ ಎಂಬ ಕೃತಿಯನ್ನು ಹೊರತಂದಿದ್ದಾರೆ. ಮುಂದೆ ಸಂಶೋಧನೆಯನ್ನು ಪೂರೈಸಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಬೇಕೆನ್ನುವುದೇ ಮುಸ್ತಾಫಾ ಅವರ ಕನಸಾಗಿದೆ.
