Site icon Ullalavani

ಯೇನೆಪೋಯದಲ್ಲಿ ಫಿಸಿಯೋಕಾನ್ -2017

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಯೇನೆಪೋಯ:ವೈದ್ಯಕೀಯ ಶಿಕ್ಷಣ ಕ್ಷೇತ್ರದೊಂದಿಗೆ ಪ್ಯಾರಾ ಮೆಡಿಕಲ್ ಕೋರ್ಸಿಗೆ ಹೆಚ್ಚಿನ ಉತ್ತೇಜನಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ , ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಫಿಸಿಯೋಥೆರಪಿ ಕೌನ್ಸಿಲ್ ಪ್ರಾರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.

ಅವರು ಯೇನೆಪೋಯ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಸೌತ್ ಕೆನರಾ ಪಿಸಿಯೋಥೆರಪಿ ಟೀಚರ್ಸ್ ಅಸೋಸಿಯೇಶನ್ ಇದರ ಆಶ್ರಯದಲ್ಲಿ ಶುಕ್ರವಾರ ನಡೆದ `ಮಂಗಳೂರು ಫಿಸಿಯೋಕಾನ್ -2017′ ಅಂತರಾಷ್ಟ್ರೀಯ ಪಿಸಿಯೋಥೆರಪಿ ಕಾನರೆನ್ಸ್‍ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಚಾಲನೆ ನೀಡಿ ಮಾತನಾಡಿದರು.

ವೈದ್ಯಕೀಯ ಶಿಕ್ಷಣ ಕ್ಷೇತ್ರದೊಂದಿಗೆ ಪ್ಯಾರಾ ಮೆಡಿಕಲ್ ಕೋರ್ಸುಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಸರಕಾರ ಮಹತ್ತರವಾದ ಯೋಜನೆಗಳನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿರುವಂತೆ ಫಿಸಿಯೋಥೆರಪಿ ಶಿಕ್ಷಣ ಉತ್ತೇಜನಕ್ಕೆ ರಾಜ್ಯದಲ್ಲಿ ಫಿಸಿಯೋಥೆರಪಿ ಕೌನ್ಸಿಲ್ ಪ್ರಾರಂಬಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೀವ ಗಾಂಧಿ ಆರೋಗ್ಯ ವಿe್ಞÁನ ವಿಶ್ವವಿದ್ಯಾನಿಲಯ ಬೆಂಗಳೂರು ಇಲ್ಲಿನ ಉಪಕುಲಪತಿ ಡಾ| ಕೆ.ಎಸ್. ರವೀಂದ್ರನಾಥ್ ಮಾತನಾಡಿ ದಕ್ಷಿಣ ಕನ್ನಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ನೀಡುವಲ್ಲಿ ಯಶಸ್ವಿಯಾಗಿದ್ದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಯೇನೆಪೆÇಯ ವಿಶ್ವವಿದ್ಯಾನಿಲಯದ ಕುಲಾ„ಪತಿ ಯೇನೆಪೋಯ ಅಬ್ದುಲ್ಲಾ ಕುಂಇ, ವೈದೇಹಿ ಇನ್‍ಸ್ಟಿಟ್ಯೂಷನ್ಸ್‍ನ ನಿರ್ದೇಶಕಿ ಡಿ.ಎ. ಕಲ್ಪಜಾ, ಯೇನೆಪೆÇಯ ವಿಶವವಿದ್ಯಾನಿಲಯದ ಉಪಕುಲಪತಿ ಡಾ| ಎಂ. ವಿಜಯ ಕುಮಾರ್, ರಾಜೀವ ಗಾಂ„ ವಿಶ್ವವಿದ್ಯಾನಿಲಯದ ಫಿಸಿಯೋಥೆರಪಿ ಬೋರ್ಡ್ ಆಫ್ ಸ್ಟಡೀಸ್‍ನ ಅಧ್ಯಕ್ಷ ಪ್ರೊ| ಸಾಯಿ ಕುಮಾರ್ ನನಮಾಲ,ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಆಧ್ಯಕ್ಷ ಯು. ಕಣಚೂರು ಮೋನು ಸಿಟಿ ಹಾಸ್ಪಿಟಲ್ ಎಂಡ್ ಡಯಾಗ್ನಾಸ್ಟಿಕ್ ಸೆಂಟರ್‍ನ ಅಧ್ಯಕ್ಷ ಡಾ| ಕೆ. ಭಾಸ್ಕರ ಶೆಟ್ಟಿ , ಇಂಡಿಯನ್ ಕ್ರಿಕೆಟ್ ತಂಡದ ಮಾಜಿ ಫಿಸಿಯೋಥೆರಪಿಸ್ಟ್ ಡಾ| ಆಲಿ ಇರಾನಿ, ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಪಿಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ| ಕೇತನ್ ಭಟಿಯಾಕರ್, ಯುಎಇಯ ಮೆಡಿಯೋರ್ ಆಸ್ಪತ್ರೆಯ ಪಿಸಿಯೋಥೆರಪಿ ಡಾ| ಡಿರ್ಕ್ ಲೌಬ್‍ಸ್ಚೆರ್ , ನೇಪಾಲದ ಫಿಸಿಯೋಥೆರಪಿಸ್ಟ್ ಬಿಮಿಕಾ, ಕಾರ್ಯಕ್ರಮ ಆಯೋಜನಾ ಸಮಿತಿ ಅಧ್ಯಕ್ಷ ಡಾ| ಯು.ಟಿ.ಇಫ್ತಿಕಾರ್, ಆಯೋಜನಾ ಸಮಿತಿ ಕಾರ್ಯದರ್ಶಿ ಡಾ| ಅಭಿಲಾಶ್ ಪಿ.ವಿ.. ಕಾರ್ಯದರ್ಶಿ ಪ್ರೊ ವಿಜಯ ಪಿ. , ಜೊತೆ ಕಾರ್ಯದರ್ಶಿ ಪ್ರೊ| ಎಸ್. ಪದ್ಮಕುಮಾರ್, ಕನ್ವೀಯರ್ ಡಾ | ಮೊಹಮ್ಮದ್ ಸುಹೈಲ್ ಉಪಸ್ಥಿತರಿದ್ದರು.

Exit mobile version