ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರ ಮಂಜೇಶ್ವರ-ಉಪ್ಪಳದ ರೀಜನಲ್ ಸಂಗಮಂ -2016- 17 ಕಾರ್ಯಕ್ರಮ ಮಾ.5ರಂದು ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಶ್ರಮ ವಾಸಿ 10 ಮಂದಿಗೆ ಗಾಲಿ ಕುರ್ಚಿ , ಸ್ಟ್ರೆಚರ್ ವಿತರಣೆ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ ಎಂದು ಮಂಜೇಶ್ವರ- ಉಪ್ಪಳದ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಲಕ್ಷ್ಣಣ್ ಕುಂಬ್ಲೆ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣ್ಣೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಕೆ.ಅಬ್ದುಲ್ ಖಾದರ್ ಮಾಂಗಡ್ ಹಾಗೂ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ನ ಮುಖ್ಯಸ್ಥ ವಿ.ಅಮರನಾಥ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ನಿಮಿಷಾ ನಾಯರ್ ಇವರಿಂದ ಕೂಚುಪುಡಿ ನೃತ್ಯ, ತುಳುನಾಡ ರತ್ನ ದಿನೇಶ್ ಅತ್ತಾವರ ಇವರಿಂದ ನೃತ್ಯ ಹಾಗೂ ಪ್ರಕಾಶ ಮಹದೇವನ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸುದ್ಧಿಗೋಷ್ಠಿಯಲ್ಲಿ ರಾಜೇಶ್ ಶೆಟ್ಟಿ, ಮೋಹನ್.ಕೆ, ಪ್ರವೀಣ್ ಪಕ್ಕಳ ಉಪಸ್ಥಿತರಿದ್ದರು.