Site icon Ullalavani

ಉಳ್ಳಾಲ ಪುರಸಭೆ ಬಜೆಟ್ 14.7 ಲಕ್ಷ ಉಳಿತಾಯ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ಉಳ್ಳಾಲ ನಗರಸಭೆ 2017-18ನೇ ಸಾಲಿನಲ್ಲಿ ಒಟ್ಟು 29 .25 ಕೋಟಿ ರೂ.ಗಳ ಆದಾಯವನ್ನು ನೀರಿಕ್ಷಿಸಿದ್ದು 29.11ಕೋಟಿ ಖರ್ಚು ಅಂದಾಜಿಸಿದ್ದು 14. 70 ಲಕ್ಷ ಮಿಗತೆ ಬಜೆಟನ್ನು ಮಂಗಳವಾರ ಪ್ರಕಟಿಸಿದೆ.

ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆ ಮತ್ತು ಸಾಮನ್ಯ ಸಭೆಯಲ್ಲಿ ಉಳ್ಳಾಲ ನಗರ ಸಭಾ ಮುಖ್ಯಾಧಿಕಾರಿ ವಾಣಿ ಆಳ್ವ ಬಜೆಟನ್ನು ಪ್ರಕಟಿಸಿದರು. ನಗರ ಸಭಾ ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಉಪಸ್ಥಿತರಿದ್ದರು.

2017-2018ನೇ ಸಾಲಿನಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 1.88 ಕೋಟಿ, ನೀರಿನ ಶುಲ್ಕದಿಂದ ರೂ. 35 ಲಕ್ಷ, ನಲ್ಲಿ ಜೋಡಣೆಯಿಂದ 5.00ಲಕ್ಷ, ಮಳಿಗೆಗಳ ಬಾಡಿಗೆಯಿಂದ ರೂ. 29.00ಲಕ್ಷ, ಕಟ್ಟಡ ಪರವಾನಿಗೆ ಮತ್ತು ಅಭಿವೃದ್ದಿ ಶುಲ್ಕಗಳಿಂದ ರೂ. 60.00ಲಕ್ಷ , ಉದ್ದಿಮೆ ಪರವಾನಿಗೆಯಿಂದ ರೂ. 20.40ಲಕ್ಷ , ಜಾಹೀರಾತು ತೆರಿಗೆಯಿಂದ 2.00ಲಕ್ಷ, ಘನತ್ಯಾಜ್ಯ ವಸ್ತು ವಿಲೇವಾರಿ ಶುಲ್ಕದಿಂದ ರೂ. 35.00ಲಕ್ಷ, ಉಪಕರಣಗಳ ಸಂಗ್ರಹಣೆ ಮತ್ತು ದಂಡ ವಸೂಲಾತಿಯಿಂದ ರೂ. 24.80ಲಕ್ಷಗಳ ವಸೂಲಾತಿಯೊಂದಿಗೆ ನಗರಸಭೆ ಸ್ವಂತ ಆದಾಯದಿಂದ ಒಟ್ಟು 4. 32 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. 24. 9ಕೋಟಿ ಸರಕಾರದ ಅನುದಾನದ ನಿರೀಕ್ಷೆಯಿದ್ದು, ನಗರಸಭೆಯ ಸ್ವಂತ ಆದಾಯದಿಮದ 4.17 ಕೋಟಿ ಖರ್ಚು ಅಂದಾಜಿಸಿದ್ದು, ಸರಕಾರದ ಅನುದಾನದಿಂದ 24.9 ಕೋಟಿ ಖರ್ಚು ಅಂದಾಜಿಸಲಾಗಿದೆ.

ನಗರಸಭೆಯು ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿ ರೂ. 1.40 ಕೋಟಿ ನಗರದ ಆರೋಗ್ಯ ಮತ್ತು ಶುಚಿತ್ವ ಕಾಪಾಡುವ ಸಲುವಾಗಿ ಘನತ್ಯಾಜ್ಯ ವಸ್ತು ವಿಲೇವರಿಗಾಗಿ ಜೆ.ಸಿ.ಬಿ ಖರೀದಿಯು ಸೇರಿ ರೂ. 2.13 ಕೋಟಿ ರೂ. ವೈಜ್ಞಾನಿಕ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ನಿರ್ಮಾಣಕ್ಕಾಗಿ ವಿಶೇಷ ಅನುದಾನದ ನಿರೀಕ್ಷೆಯೊಂದಿಗೆ ರೂ. 1 ಕೋಟಿ ರೂ. ಮೀಸಲಿರಿಸಲಾಗಿದೆ.

ಮಾರುಕಟ್ಟೆ ನಿರ್ಮಾಣಕ್ಕಾಗಿ ರೂ. 35.00 ಲಕ್ಷ, ಕಚೇರಿಗೆ ವಾಹನ ಖರೀದಿಗಾಗಿ ರೂ. 10.00ಲಕ್ಷ, ಕಚೇರಿದ ಕಟ್ಟಡದ ನವೀಕರಣಕ್ಕಾಗಿ ರೂ. 20.00ಲಕ್ಷ ಬಸ್ಸು ತಂಗುದಾಣ ಮತ್ತು ಸ್ವಾಗತ ಕಮಾನು ನಿರ್ಮಾಣಕ್ಕಾಗಿ ರೂ. 10.00ಲಕ್ಷ ರಸ್ತೆಗಳ ನಿರ್ಮಾಣಕ್ಕಾಗಿ ರೂ. 2 ಕೋಟಿ, ರಸ್ತೆ ಬದಿ ಚರಂಡಿಗಳ ನಿರ್ಮಾಣಕ್ಕಾಗಿ 1.75 ಕೋಟಿ, ಬೀದಿ ದೀಪಗಳಿಗಾಗಿ ರೂ. 45.00ಲಕ್ಷ, ನೆರೆ ನೀರಿನ ಚರಂಡಿಗಾಗಿ ರೂ. 53.00ಲಕ್ಷ, ಸಾರ್ವಜನಿಕ ಶೌಚಾಲಯಕ್ಕಾಗಿ ರೂ. 17.00ಲಕ್ಷ, ಉದ್ಯಾನವನಗಳ ನಿರ್ಮಾಣ ಮಾತ್ತು ನಿರ್ವಹಣೆಗಾಗಿ ರೂ. 17.00ಲಕ್ಷವನ್ನು ನಿಗದಿಪಡಿಸಲಾಗಿದೆ.

ಶೇ 24.10ರಡಿ ನಗರಸಭಾ ನಿ„ಯಿಂದ 7.30ಲಕ್ಷವನ್ನು, ಎಸ್.ಎಫ್.ಸಿ ಅನುದಾನದಿಂದ ರೂ. 38.32ಲಕ್ಷವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದೆ. ಶೇ 7.25ರಲ್ಲಿ ಬಡಜನರ ಕಲ್ಯಾಣಕ್ಕಾಗಿ ನಗರಸಭಾ ನಿ„ಯಿಂದ ರೂ. 2.20ಲಕ್ಷವನ್ನು ಎಸ್.ಎಫ್.ಸಿ ಅನುದಾನದಿಂದ 11.53ಲಕ್ಷವನ್ನು ಕಾದಿರಿಸಲಾಗಿದೆ. ಶೇ3ರ ಯೋಜನೆಯಡಿ ಅಂಗವಿಕಲರ ಕಲ್ಯಾಣಕ್ಕಾಗಿ ನಗರಸಭಾ ನಿ„ಯಿಂದ 0.91ಲಕ್ಷವನ್ನು ಮತ್ತು ಎಸ್ಎಫ್ಸಿ ಅನುದಾನದಡಿ ರೂ. 4.77ಲಕ್ಷವನ್ನು ಮೀಸಲಿರಿಸಲಾಗಿದೆ. ಹೌಸಿಂಗ್ ಪಾರ್ ಅಲ್ ಯೋಜನೆಯಡಿ ಬಡಜನರಿಗೆ ಮನೆಗಳ ನಿರ್ಮಾಣಕ್ಕಾಗಿ ರೂ. 15ಲಕ್ಷವನ್ನು 2017-2018ನೇ ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ.

ನಗರೋತ್ಧಾನ ಅನುದಾನದಲ್ಲಿ ಉಳ್ಳಾಲ ನಗರಸಭೆಯು ರೂ 25.00 ಕೋಟಿ ಅನುದಾನ ಕ್ರಿಯಾಯೋಜನೆ :
1. ಕುಡಿಯುವ ನೀರಿಗಾಗಿ ರೂ.5.3 ಕೋಟಿ ಅನುದಾನದಲ್ಲಿ ನಗರ ವ್ಯಾಪ್ತಿಯಲ್ಲಿ ತೆರೆದ ಬಾವಿ ಹಾಗೂ ಮೇಲ್ಮಟ್ಟದ ಜಲ ಸಂಗ್ರಹಗಾರ ನಿರ್ಮಾಣ ಮತ್ತು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಒತ್ತು ನೀಡಲಾಗಿದೆ.

2. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನರು ವಾಸಿಸುವ ಪ್ರದೇಶದ ಅಭಿವೃದ್ದಿಗಾಗಿ ರೂ. 3.7 ಕೋಟಿ ಮೀಸಲಿರಿಸಲಾಗಿದೆ.

3. ನಗರವ್ಯಾಪ್ತಿಯ ಎಲ್ಲಾ ವಾರ್ಡುಗಳಿಗೆ ಸಂಬಂಧಪಟ್ಟ ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ದಿಗಾಗಿ ರೂ. 8.14ಲಕ್ಷವನ್ನು ಕಾಯ್ದಿರಿಸಲಾಗಿದೆ.

4. ನಗರೋತ್ಥಾನ ಅನುದಾನದಲ್ಲಿ ರೂ. 1.16 ಕೋಟಿ ರೂ. ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿದೆ.

5. ಉಳ್ಳಾಲ ನಗರ ವ್ಯಾಪ್ತಿಯ ಪೆರ್ಮನ್ನೂರು, ತೊಕ್ಕೊಟ್ಟಿನಲ್ಲಿ ಗ್ರಾಮಕರಣಿಕರ ಕಚೇರಿಗೆ , ನೆಮ್ಮದಿ ಕೇಂದ್ರ, ಶಾಸಕರ ಕಚೇರಿ ನಿರ್ಮಾಣ ಮತ್ತು ನಗರಸಭಾ ಕಚೇರಿ ಕಟ್ಟಡದ ಅಭಿವೃದ್ದಿಗೆ ರೂ. 60.45ಲಕ್ಷವನ್ನು ನಗರ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ದಾರಿದೀಪ ಮತ್ತು ಪಾರ್ಕ್‍ಗಳ  ಅಭಿವೃದ್ದಿಗಾಗಿ ರೂ. 72.00ಲಕ್ಷವನ್ನು ಮತ್ತು ತೊಕ್ಕೋಟ್ಟಿನಲ್ಲಿ ಮಾರುಕಟ್ಟೆ ನಿರ್ಮಾಣ, ಡಾ| ಬಿ.ಆರ್.ಅಂಬೇಡ್ಕರ್ ರಂಗಮಂದಿರ ಅಭಿವೃದ್ದಿ ಹಾಗೂ ನಗರ ವ್ಯಾಪ್ತಿಯ ಆಯ್ದ ಭಾಗಗಳಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕಾಗಿ ರೂ. 3.00ಲಕ್ಷವನ್ನು ಕಾಯ್ದಿರಿಸಿಲಾಗಿದೆ.

* ನಗರಸಭಾ ವ್ಯಾಪ್ತಿಯಲ್ಲಿ ಆರೋಗ್ಯ, ಘನತ್ಯಾಜ್ಯ ವಿಲೇವಾರಿ ಮತ್ತು ಶುಚಿತ್ವಕ್ಕೆ ಒತ್ತು.
* ಕುಡಿಯುವ ನೀರಿಗೆ ಆದ್ಯತೆ.
* ನಗದು ರಹಿತ ವ್ಯವಹಾರಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಕಛೇರಿಯನ್ನು ಗಣಕೀಕರಣಗೊಳಿಸಿ ಸಾರ್ವಜನಿಕರಿಗೆ ಶೀಘ್ರ ಸೇವೆ.

 

Exit mobile version