ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಭೇಟಿ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಜಿಲ್ಲೆಯಾದ್ಯಂತ ಕರೆ ನೀಡಿರುವ ಮಂಗಳೂರು ಬಂದ್ ಹಿನ್ನೆಲೆಯಲ್ಲಿ ಉಳ್ಳಾಲ, ಕೊಣಾಜೆ ಹಾಗೂ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಕೃತ್ಯವನ್ನು ಮುಂದುವರಿಸಿದ್ದು, ಮೂರು ಕರ್ನಾಟಕ ಸಾರಿಗೆ ಸೇರಿದಂತೆ ಒಂದು ಖಾಸಗಿ ಬಸ್ಸುಗಳಿಗೆ ಕಲ್ಲುತೂರಾಟ ನಡೆಸಿರುವ ಘಟನೆಯಲ್ಲಿ ಚಾಲಕರಿಬ್ಬರು ಗಾಯಗೊಂಡಿದ್ದಾರೆ.
ಆರ್‍ಟಿಓ ಜಿಲ್ಲಾಧಿಕಾರಿ ಹೊಣೆ
ಬೆಳಗ್ಗಿನಿಂದ ಬಸ್ಸನ್ನು ರಸ್ತೆಗೆ ಇಳಿಸಿರಲಿಲ್ಲ. ಆದರೆ ಆರ್ ಟಿಓ ಮತ್ತು ಜಿಲ್ಲಾಧಿಕಾರಿಗಳು ಬಸ್ ತೆಗೆಯದೇ ಇದ್ದಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಹಾಕುವುದಾಗಿ ಬೆದರಿಸಿದರು. ಇದಕ್ಕೆ ಹೆದರಿ ಅನಿವಾರ್ಯವಾಗಿ ಬಸ್ಸನ್ನು ರಸ್ತೆಗೆ ಇಳಿಸಬೇಕಾಯಿತು. ಇದೀಗ ಸಾವಿರಾರು ಬೆಲೆಬಾಳುವ ಗಾಜು ಪುಡಿಯಾಗಿದೆ. ಇದಕ್ಕೆ ಆರ್ ಟಿಓ, ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಖಾಸಗಿ ಬಸ್ಸು ಮಾಲೀಕರಾದ ಶರತ್