ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸಾಮರಸ್ಯದಿಂದ ಮಾತ್ರ ಸಮಾಜದ ಉದ್ಧಾರ ಸಾಧ್ಯ ಎಂದು ಬದ್ರಿಯ ಕಾಲೇಜಿನ ಪ್ರಾಚಾರ್ಯರಾಗಿರುವ ಡಾ| ಇಸ್ಮಾಯಿಲ್ ಎಸ್. ಅಬಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಟುಕು ಸಾಹಿತಿ ಗಣೇಶ್ ಪ್ರಸಾದ್ ವಹಿಸಿದ್ದರು. ಒಲವಿನ ಚರ್ಚ್‍ನ ಧರ್ಮಗುರು ರೆ| ಫಾ| ಲಾರೆನ್ಸ್ ಡಿ’ಸೋಜಾ ಶುಭಹಾರೈಸಿದರು. ಹಿರಿಯ ಸಾಹಿತಿ ಚಂದ್ರಕಲಾ ನಂದಾವರ, ಪ್ರಸಾದ್ ನೇತ್ರಾಲಯದ ಅಬ್ದುಲ್ ಖಾದರ್ ನೇತ್ರದಾನದ ಬಗ್ಗೆ ಮಾಹಿತಿ ನೀಡಿದರು.
ಕವಿ ಸಾಹಿತಿಗಳಾದ ಅಶೋಕ್ ಕುಮಾರ್ , ಜನಶಿಕ್ಷಣ ಟ್ರಸ್ಟ್‍ನ ಶೀನ ಶೆಟ್ಟಿ, ಕೃಷ್ಣಮೂಲ್ಯ, ಕಾರ್ಯಕ್ರಮದ ಸಂಘಟಕಿ ಸಾಹಿತಿ ಗುಣವತಿ ಉಪಸ್ಥಿತರಿದ್ದರು.
ಸುಧಾ ನಾಗೇಶ್ ವಂದಿಸಿದರು. ನಳಿನಾಕ್ಷಿ ಬಿಜೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಕುಂತಲಾ ನಾಡಗೀತೆ ಪ್ರಸ್ತುತ ಪಡಿಸಿದರು. ಶ್ರೀಕಾಂತ್ ಕೊಂಡಾಣ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.