Site icon Ullalavani

ವಿದೇಶದಲ್ಲಿರುವವರು ರೇಷನ್ ಕಾರ್ಡ್ ಪಡೆಯಬಹುದು: ಸಚಿವ ಖಾದರ್

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ : ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್ ಬಳಸಿಕೊಂಡು ತಮ್ಮ ರೇಷನ್ ಕಾರ್ಡನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು.

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಸೆಕ್ಟರ್ ವತಿಯಿಂದ ಮದೀನಾದ ಕೆ.ಸಿ.ಎಫ್ ಭವನದಲ್ಲಿ ನಡೆದ ಅಸುಪ್ಪಾ 2ನೇ ಆವೃತ್ತಿಯ ಸ್ಪೋಕನ್ ಇಂಗ್ಲೀಷ್ ತರಗತಿ ಉದ್ಘಾಟಿಸಿ ಮಾತನಾಡಿದರು.

ರೇಷನ್ ಕಾರ್ಡ್ ಇಲ್ಲದೆ ವಿದೇಶದಲ್ಲಿರುವ ರಾಜ್ಯದ ಪ್ರತಿಯೊಬ್ಬರು ತಾವು ಅರ್ಜಿ ಸಲ್ಲಿಸಿದ ತಿಂಗಳೊಳಗೆ ರೇಷನ್ ಕಾರ್ಡ್ ಅರ್ಜಿದಾರರ ಕೈ ಸೇರಲಿದೆ ಎಂದ ಅವರು ಕೆಸಿಎಫ್‍ನ ಮದೀನಾ ಸೆಕ್ಟರ್ ಅಂಗ್ಲ ಭಾಷೆ ಕಲಿಕೆಗೆ ವ್ಯವಸ್ಥೆ ಮಾಡುವ ಮೂಲಕ ಉತ್ತಮ ಕಾರ್ಯ ನಡೆಸುತ್ತಿದ್ದು, ನಮ್ಮ ಮಾತೃಭಾಷೆಯೊಂದಿಗೆ ಇತರ ಭಾಷೆಗಳಿಗೆ ಆದ್ಯತೆ ನೀಡಿದರೆ ಭಾಷಾ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯ. ಪ್ರಸಕ್ತ ಸನ್ನಿವೇಶದಲ್ಲಿ ಇಂಗ್ಲೀಷ್ ಭಾಷೆ ಅತ್ಯಗತ್ಯವಾಗಿದ್ದು, ನಾವು ಇತರೆ ಭಾಷೆಗಳನ್ನು ಕಲಿತಂತೆ ನಮ್ಮ ವ್ಯಕ್ತಿತ್ವವು ಕೂಡ ಬೆಳೆಯುತ್ತಾ ಹೋಗುತ್ತದೆ ಎಂದರು.

ಇದೇ ವೇಳೆ ಕರ್ನಾಟಕ ಇಹ್ಸಾನ್ ಮುಖ್ಯಸ್ಥ ಇಬ್ರಾಹಿಂ ಸಖಾಫಿ ದಾವಣಗೆರೆ ಮಾತನಾಡಿ ಭಾಷೆ ಕಲಿತರೆ ಮಾತ್ರ ಪ್ರಬೋಧನ ರಂಗದಲ್ಲಿ ಮುನ್ನಡೆಯಲು ಸಾಧ್ಯ, ಈ ಹಿನ್ನೆಲೆಯಲ್ಲಿ ನಾವು ಇತರ ಭಾಷೆಯನ್ನು ಕಲಿಯಬೇಕು. ಇಂಗ್ಲೀಷ್ ಕಲಿತರೆ ಪೈಪೆÇೀಟಿ ಯುಗದಲ್ಲಿ ಎಲ್ಲವನ್ನೂ ಎದುರಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಕಾರ್ಯಕರ್ತರು ಸಚಿವ ಯು.ಟಿ.ಖಾದರ್ ಹಾಗೂ ಇಹ್ಸಾನ್ ಮುಖ್ಯಸ್ಥ ಇಬ್ರಾಹಿಂ ಸಖಾಫಿ ದಾವಣಗೆರೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕೆ.ಎಸಿ.ಎಫ್. ರಾಷ್ಟ್ರೀಯ ಸಮಿತಿ ಆಯೋಜಿಸಿದ ಅಸುಫಾ ಪರೀಕ್ಷೆಯಲ್ಲಿ ಪ್ರಥಮ ಪಡೆದ ಉಮ್ಮರ್ ಗೇರುಕಟ್ಟೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಐ.ಸಿ.ಎಫ್. ನ ಯೂಸುಫ್ ಸಅದಿ, ಮೊಹಿಯುದ್ದೀನ್ ಸಖಾಫಿ, ಡಿ.ಕೆ.ಎಸ್.ಸಿ ಯ ಮಹಮೂದ್ ಮುಸ್ಲಿಯಾರ್ ಉದ್ದಬೆಟ್ಟು, ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ, ಕೆಸಿಎಫ್ ಮದೀನಾ ಸೆಕ್ಟರ್, ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ, ಕೆಸಿಎಫ್ ಮದೀನಾ ಝೋನಲ್ ರಿಲೀಫ್ ಚೇರ್ಮನ್ ತಾಜುದ್ದೀನ್ ಸುಳ್ಯ, ರಝಾಕ್ ಅಳಕೆ ಮಜಲ್, ಡಾ| ರಫೀಕ್ ಉಪ್ಪಳ, ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
ಸ್ಪೋಕನ್ ಇಂಗ್ಲೀಷ್ ತರಗತಿಯ ಮುಖ್ಯಸ್ಥ ಉಸ್ಮಾನ್ ಮಾಸ್ಟರ್ ಪ್ರಸ್ತಾವಿಕವಾಗಿ ಮಾತನಾಡಿದರು.

Exit mobile version