Site icon Ullalavani

ಮಣವಾಠಿ ಬೀವಿಯವರ ಪವಾಡದಿಂದ ಪೊಯ್ಯತ್ತಬೈಲ್ ಅಭಿವೃದ್ಧಿ : ಅತ್ತಾವುಲ್ಲ ತಂಙಳ್

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಪೊಯ್ಯತ್ತಬೈಲ್: ಉತ್ತಮ ಪಾಂಡಿತ್ಯವನ್ನು ಹೊಂದಿದ ಮಣವಾಠಿ ಬೀವಿಯವರು ಪವಾಢದಿಂದ ಪೊಯ್ಯತ್ತಬೈಲ್ ಎಂಬ ಕುಗ್ರಾಮ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟು ಈಗಲೂ ಹೆಸರು ಉಳಿಸಿಕೊಂಡಿದೆ. ಇಲ್ಲಿನ ಉರೂಸ್ ಕಾರ್ಯಕ್ರಮದಲ್ಲಿ ಯಾವುದೇ ಭಿನ್ನಮತ ತೋರದೇ ಎಲ್ಲರೂ ಸಹಮತದಿಂದ ವರ್ತಿಸಿ ಕಾರ್ಯನಿರ್ವಹಿಸಬೇಕಾದ ಅಗತ್ಯತೆ ಇದೆ ಎಂದು ಮಂಜೇಶ್ವರ ಸಂಯುಕ್ತ ಜಮಾಅತ್ ಅಧ್ಯಕ್ಷ ಅಸ್ಸಯ್ಯದ್ ಅತ್ತಾವುಲ್ಲ ತಂಙಳ್ ಹೇಳಿದರು.


ಅವರು ಪೊಯ್ಯತ್ತಬೈಲ್ ನಲ್ಲಿರುವ ಮಣವಾಠಿಬೀವಿ ದರ್ಗಾದ ಉರೂಸ್ ಕಾರ್ಯಕ್ರಮವನ್ನು ಶುಕ್ರವಾರ ಧ್ವಜಾರೋಹಣ ನಡೆಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಉಳ್ಳಾಲದ ನಂತರ ಸ್ಥಾನ ಈ ದರ್ಗಾಕ್ಕಿದೆ. ಅದನ್ನು ಎಲ್ಲರೂ ಒಗ್ಗಟ್ಟಿನಿಂದ ಇದ್ದುಕೊಂಡು ಉಳಿಸಿಕೊಂಡು ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಅಧ್ಯಕ್ಷ ವಿ. ಅಹಮದ್ ಕುಂಞ  ಓಡಂಗಳ, ಜಮಾಅತ್‍ನ ಮಾಜಿ ಅಧ್ಯಕ್ಷ ರಾದ ನಡಿಬೈಲ್ ಅಹ್ಮದ್ ಕುಂಞ ಪಿ.ಕೆ.ಕುಂಞ ಅಹ್ಮದ್ ಮುಸ್ಲಿಯಾರ್, ಟಿ. ಅಹ್ಮದ್, ಟಿ. ಇಸ್ಮಾಯಿಲ್ ಮಾಸ್ಟರ್, ಎಸ್.ಎಂ ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಜಮಾಅತ್ ಸಮಿತಿ ಕಾರ್ಯದರ್ಶಿ ಪಿ.ಕೆ. ಇಬ್ರಾಹಿಂ ಸ್ವಾಗತಿಸಿದರು.

Exit mobile version