ಉಳ್ಳಾಲ್ ನ್ಯೂಸ್ ಡೆಸ್ಕ್
ಮಂಗಳಗಂಗೋತ್ರಿ: ಆಧುನಿಕತೆ ತಂತ್ರಜ್ಞಾನಗಳು ಬೆಳೆದಿರುವಂತೆಯೇ ನಮ್ಮ ಜಾನಪದ ಅಧ್ಯಯನದಲ್ಲೂ ಬದಲಾವಣೆಗಳನ್ನು ಕಂಡುಕೊಳ್ಳಬೇಕಿದ್ದು, ಭಾರತದಲ್ಲಿ ಜಾನಪದವನ್ನು ವೈe್ಞÁನಿಕವಾಗಿ ಅಧ್ಯಯನ ನಡೆಯುತ್ತಿದ್ದರೂ, ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆಯ ವತಿಯಿಂದ ಜಾನಪದ ಸರ್ವೆ ಹಾಗೂ ರಾಷ್ಟ್ರೀಯ ಜಾನಪದ ಅಕಾಡೆಮಿಯ ನಿರ್ಮಾಣಕ್ಕಾಗಿ ಒತ್ತಾಯಿಸಲಾಗುತ್ತಿದೆ ಎಂದು ಕಲಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಎಚ್.ಎಂ.ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
ಕರವಾಳಿ ಪ್ರದೇಶವು ಜಾನಪದ ಸಂಸ್ಕøತಿಯ ತವರಾಗಿದೆ. ಅನೇಕ ವಿಧ್ವಾಂಸರು ಇಲ್ಲಿ ಸಂಶೋಧನೆ ನಡೆಸಿದ್ದಾರೆ. ಪ್ರೊ| ವಿವೇಕ್ ರೈ, ಪ್ರೊ| ಚಿನ್ನಪ್ಪ ಗೌಡ, ಲಾರಿಹಾಂಕರ್ ಸೇರಿದಂತೆ ಹಲವು ವಿದ್ವಾಂಸರ ಮಾರ್ಗದರ್ಶನದಲ್ಲಿ ತುಳುನಾಡಿನ ಗೋಪಾಲನಾಯ್ಕ ಅವರು ಕಟ್ಟಿಕೊಟ್ಟ ಸಿರಿ ಮಹಾಕಾವ್ಯವನ್ನು ಫಿನ್‍ಲ್ಯಾಂಡ್‍ನಲ್ಲಿ ಪ್ರಕಟಗೊಳ್ಳುವ ಮೂಲಕ ಇದೊಂದು ಅಪೂರ್ವವಾದ ದಾಖಲಾತಿಯಾಗಿ ಉಳಿದಿದೆ. ಹಂಗೇರಿಯಲ್ಲಿ ಅಲ್ಲಿಯ ಸರ್ಕಾರ ಜಾನಪದವನ್ನು ವಿಜ್ಞಾನ ವಿಭಾಗದೊಂದಿಗೆ ಸೇರಿಸಿ ಅಧ್ಯಯನ ನಡೆಸುತ್ತಿದೆ ಎಂದರು.
ಪೇಟೆಂಟ್ ಮಾಡಿಲ್ಲ : ನಮ್ಮ ಪೂರ್ವಜರು ಅಥವಾ ಜಾನಪದರು ಕೃಷಿಯಲ್ಲಿ, ಭತ್ತದ ವಿವಿಧ ತಳಿಗಳ ಉತ್ಪಾದನೆಯಲ್ಲಿ ವೃಜ್ಞಾನಿಕ ಆವಿಷ್ಕಾರಗಳನ್ನು ಮಾಡಿ ಜಗತ್ತಿಗೇ ಅಪೂರ್ವವಾದ ಕೊಡುಗೆ ನೀಡಿದ್ದಾರೆ.ಜಾನಪದ ವೈದ್ಯಪರಂಪರೆಯೂ ಬೆಳೆದು ಬಂದ ಹಾದಿಯೂ ಕೂಡಾ ವಿಶಿಷ್ಟವಾದುದು. ಆದರೆ ನಮ್ಮ ಪೂರ್ವಜರು ಯಾವತ್ತಿಗೂ ಪ್ರಚಾರಕ್ಕೆ ಅಥವಾ ಪೇಟೆಂಟ್‍ಗಾಗಿ ಹಂಬಲಿಸಿದವರಲ್ಲ. ಇಂತಹ ಶ್ರೇಷ್ಟವಾದ ಜಾನಪದ ಸಂಪತ್ತು ನಮ್ಮಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
ದಕ್ಷಿಣ ಭಾರತೀಯ ಜಾನಪದ ಅಧ್ಯಯನ ಸಂಸ್ಥೆಯು ಈಗಾಗಲೇ ಜಾನಪದ ವಿಷಯಕೆ ಸಂಬ„ಸಿದಂತೆ ಕರ್ನಾಟವೂ ಸೇರಿ ರಾಷ್ಟ್ರಮಟ್ಟದಲ್ಲಿ ಹಲವಾರು ಮಹತ್ವಪೂರ್ಣ ಯೋಜನೆಗಳನ್ನು ಪೂರ್ಣಗೊಳಿಸಿದೆ ಮತ್ತು ಜಾನಪದ ವಿಷಯಕ್ಕೆ ಸಂಬಂ„ಸಿದಂತೆ ಹಲವಾರು ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಜಾನಪದ ವಿಷಯದಲ್ಲಿ ಸಂಶೋಧನೆ ನಡೆಸುವ ಸಂಶೋಧಕರಿಗೆ ವೀರಸುಬ್ರಹ್ಮಣ್ಯಂ ಫೆಲೋಶಿಪ್‍ನ್ನು ನೀಡಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ ಕೆ.ಎಂ.ಲೋಕೇಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ ಅಭಯಕುಮಾರ್ ಉಪಸ್ಥಿತರಿದ್ದರು. ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ ಸೋಮಣ್ಣ ಸ್ವಾಗತಿಸಿ ಪ್ರಾಸ್ತಾವನೆಗೈದರು. ಕರ್ನಾಟಕ ರಾಜ್ಯ ಫಾಸಿಲ್ಸ್‍ನ ಕಾರ್ಯದರ್ಶಿ ಡಾ| ರಾಜಶ್ರೀ ವಂದಿಸಿದರು. ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.