Site icon Ullalavani

ಉಳ್ಳಾಲದಾದ್ಯಂತ ಕ್ಯಾಮರಾ ಕಣ್ಗಾವಲು

ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಪಿಎಫ್‍ಐನವರ ಯುನಿಟಿ ಮಾರ್ಚ್ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ವಿಧಿಸಿರುವ ಹಿನ್ನೆಲೆಯಲ್ಲಿ ಉಳ್ಳಾಲದ ವಿವಿದೆಡೆ ಕ್ಯಾಮರಾ ಕಣ್ಗಾವಲು ಇರಿಸುವ ಮೂಲಕ ಬಿಗಿಬಂದೋಬಸ್ತನ್ನು ಆಯೋಜಿಸಲಾಗಿದೆ.


ಉಳ್ಳಾಲದಾದ್ಯಂತ 8 ಕ್ಯಾಮರಾಗಳನ್ನು ಕ್ಯಾಮರಾ ಮೆನ್ ಜತೆಗೆ ನಿಯೋಜಿಸಲಾಗಿದೆ. ತೊಕ್ಕೊಟ್ಟು, ಮಾಸ್ತಿಕಟ್ಟೆ, ಕೋಡಿ, ಕೋಟೆಪುರ, ದರ್ಗಾ ವಠಾರ, ಮುಕ್ಕಚ್ಚೇರಿ, ಅಬ್ಬಕ್ಕ ವೃತ್ತದ ಭಾಗಗಳಲ್ಲಿ ವೀಡಿಯೋ ಕ್ಯಾಮರಾಗಳನ್ನು ಇರಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೆ ಕ್ಯಾಮರಾಗಳನ್ನು ರಸ್ತೆಬದಿಗಳಲ್ಲೇ ಇರಿಸಲಾಗಿದೆ.
ಅಹಿತಕರ ಘಟನೆಗಳ ತಡೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಇಂತಹ ಕ್ರಮವನ್ನು ಪೊಲೀಸ್ ಕಮೀಷನರ್ ಅವರ ಆದೇಶದಂತೆ ಇರಿಸಲಾಗಿದೆ.
ರದ್ದುಗೊಂಡ ಕಾರ್ಯಕ್ರಮ: ಉಳ್ಳಾಲದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಿಎಫ್‍ಐ ವತಿಯಿಂದ ಯುನಿಟಿ ಮಾಚ್ ್ ಆಯೋಜಿಸಲಾಗಿತ್ತು. ಆದರೆ ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮಂಗಳೂರಿಗೆ ಸ್ಥಳಾಂತರಗೊಳಿಸಲಾಗಿತ್ತು. ಅಲ್ಲದೆ ತೊಕ್ಕೊಟ್ಟುವಿನಾದ್ಯಂತ ಕಾರ್ಯಕ್ರಮದ ಪ್ರಚಾರಕ್ಕಾಗಿ ಹಾಕಲಾಗಿದ್ದ ಬ್ಯಾನರ್, ಕಮಾನು ಧ್ವಜಗಳನ್ನು ಉಳ್ಳಾಲ ಪೊಲೀಸರು ತೆರವು ಕೂಡಾ ನಡೆಸಿದ್ದರು.

Exit mobile version