Site icon Ullalavani

ಪೊಲೀಸರಿಂದ ಪಿಎಫ್‍ಐ ಬ್ಯಾನರ್ ತೆರವು

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಅನುಮತಿಯಿಲ್ಲದೆ ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲದಲ್ಲಿ ಫೆ.17 ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರಕ್ಕಾಗಿ ಉಳ್ಳಾಲ, ತೊಕ್ಕೊಟ್ಟು, ಕಲ್ಲಾಪುವಿನಲ್ಲಿ ಹಾಕಿದ್ದ ಸ್ವಾಗತ ಕಮಾನುಗಳು, ಬ್ಯಾನರ್ , ಧ್ವಜಗಳನ್ನು ಪೊಲೀಸರು ತೆರವುಗೊಳಿಸಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಫೆ.17 ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವರ್ಷಾಚರಣೆ ಪ್ರಯುಕ್ತ ಉಳ್ಳಾಲದಲ್ಲಿ ಯುನಿಟಿ ಮಾರ್ಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದಕ್ಕಾಗಿ ಬುಧವಾರ ತಡರಾತ್ರಿ ಆಯೋಜಕರು ಉಳ್ಳಾಲ, ಕಲ್ಲಾಪು, ತೊಕ್ಕೊಟ್ಟು, ಚೆಂಬುಗುಡ್ಡೆ ಭಾಗದಲ್ಲಿ ಸ್ವಾಗತ ಕಮಾನು , ಬ್ಯಾನರ್ ಗಳನ್ನು ಹಾಗೂ ಧ್ವಜಗಳನ್ನು ಪ್ರಚಾರಕ್ಕೆಂದು ಅಳವಡಿಸಿದ್ದರು. ಆದರೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ ಹಾಗೂ ಪೊಲೀಸ್ ಕಮೀಷನರ್ ಅವರ ಆದೇಶದಂತೆ ಎಸಿಪಿ ಶೃತಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸರು ಎಲ್ಲವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಕುರಿತು ಆಯೋಜಕರ ವಿರುದ್ಧ ಪ್ರಕರಣವೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ.

Exit mobile version