
ಅಂಬ್ಲಮೊಗರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ ಹಾಗೂ ಅಂಬ್ಲಮೊಗರು ಲಕ್ಷ್ಮೀ ನರಸಿಂಹ ಶಾಖೆಯನ್ನು ಹುಟ್ಟುಹಾಕಿ ಮಕ್ಕಳಿಗೆ ಸಂಘ ಶಿಕ್ಷಣವನ್ನು ಕೊಡುತ್ತಿದ್ದ ಅಂಬ್ಲಮೊಗರು ನಿವಾಸಿ ದೇವರಾಜ್ ಆಚಾರ್ಯ(40) ನಿಧನರಾಗಿದ್ದಾರೆ.
ಸಮಾಜಮುಖಿ ಚಿಂತನೆಯುಳ್ಳ ಸಕ್ರಿಯ ಕಾರ್ಯಕರ್ತನಾಗಿದ್ದ ದೇವರಾಜ್, ಸಂಘದ ಚಟುವಟಿಕೆಗಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿರಿಸಿದ್ದರು. ಮೃತರ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡ ಬ್ರಿಜೇಶ್ ನಾಯರ್, ಟೀಮ್ ಅಗ್ನಿ ಅಂಬ್ಲಮೊಗರು ತೀವ್ರ ಸಂತಾಪ ಸೂಚಿಸಿದೆ.