



ವರದಿ: ಅಭಿಷೇಕ್ ಅಸೈಗೋಳಿ
ಅಸೈಗೋಳಿ: ಇಲ್ಲಿನ ಕೊಣಾಜೆ ಪಟ್ಟೋರಿಯ ಶ್ರೀ ನಾಗಬ್ರಹ್ಮ ಅರಸು ಉಳ್ಳಾಲ್ತಿ ಮಾಡ ಇಲ್ಲಿ 490 ವರ್ಷಗಳ ಬಳಿಕ ಪಟ್ಟೋರಿ ಧರ್ಮ ನಡಾವಳಿ ಮಾ. 16 ರಿಂದ 18 ರವರೆಗೆ ಜರಗಲಿದೆ.
ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಉಳ್ಳಾಲ್ತಿ ಅಮ್ಮನ ಮುಗ ಮತ್ತು ಧರ್ಮ ಅರಸರ ಕಿರುವಾಳ್ ಭಂಡಾರದ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಉಳ್ಳಾಲ್ತಿ ಧರ್ಮ ಅರಸರ ಪಟ್ಟೋರಿ ಧರ್ಮ ನಡಾವಳಿ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದೆ.
800 ವರ್ಷಗಳ ಇತಿಹಾಸವನ್ನು ಪಟ್ಟೋರಿಯ ಮಣ್ಣು ಹೊಂದಿದ್ದು, 490 ವರ್ಷಗಳ ಬಳಿಕ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಧರ್ಮ ನಡಾವಳಿ ನಡೆಯುತ್ತಿದೆ .

ಬೆಳಿಗ್ಗೆ 8 ಗಂಟೆಯಿಂದ ಶ್ರೀ ಉಳ್ಳಾಲ್ತಿ ಅಮ್ಮನ ನೂತನ ಮುಗ- ಧರ್ಮರಸರ ಕಿರುವಾಳ್ ಪ್ರತಿಷ್ಠಾ ಕಲಶಾಭಿಷೇಕ, ಭೂತ ನಾಗ ಪ್ರತಿಷ್ಠೆ, ಸಂಜೆ 4 ಕ್ಕೆ ಚಪ್ಪರ ಮುಹೂರ್ತ, ಮಾ.18 ರಂದು ಬೆಳಿಗ್ಗೆ 5 ಕ್ಕೆ ಉಳ್ಳಾಲ್ತಿ ಮಾಡಕ್ಕೆ ಕಿರುವಾಳ್ ಆಗಮನ, ಶುದ್ಧಿ ಕಲಶ, ತಂಬಿಲ ನಂತರ ಕಿರುವಾಳ್ ರಾಜಾಂಗಣಕ್ಕೆ ಇಳಿಯಲಿದೆ.
ಬೆಳಿಗ್ಗೆ 10.30 ಕ್ಕೆ ಶ್ರೀ ಧರ್ಮರಸರ ನೇಮ , ರಾತ್ರಿ 10 ಕ್ಕೆ ಶ್ರೀ ಸಣ್ಣರಸರ ನೇಮ, ರಾತ್ರಿ 12 ಕ್ಕೆ ಶ್ರೀ ಉಳ್ಳಾಲ್ತಿ ಅಮ್ಮನವರ ಕೆರೆನೇಮ ಸಹಿತ ವಲಸರಿ, ಪ್ರಸಾದ ವಿತರಣೆಯೂ ಜರಗಲಿದೆ.