
ವಿದ್ಯಾರ್ಥಿಗಳು ವೇದಿಕೆಯಲ್ಲಿ ನಿಂತು ಮಾತನಾಡಲು, ಭಾಷಾ ಉಚ್ಛಾರ ಸರಿಪಡಿಸಲು ನಿವೃತ್ತ ಶಿಕ್ಷಕಿಯರ ಪರಿಶ್ರಮ, ನಿರಂತರ ಪ್ರೋತ್ಸಾಹ ಕಾರಣ ಎಂದು ಉಳ್ಳಾಲ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಫಾತಿಮತ್ ರಫೀದಾ ಹೇಳಿದರು.
ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ವತಿಯಿಂದ ಹರೇಕಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಿವೃತ್ತ ಶಿಕ್ಷಕರಿಗೆ ನಡೆದ ವಿದಾಯ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮಾತನಾಡಿ, ಶಿಕ್ಷಕಿಯರು ವೃತ್ತಿಯಿಂದ ನಿವೃತ್ತರಾದ ಬಳಿಕ ಮನೆಗೇ ಸೀಮಿತರಾದರೆ ಆರೋಗ್ಯ ಹದಗೆಡುತ್ತದೆ, ಪ್ರತಿದಿನ ಯಾವುದೇ ಸಮಯದಲ್ಲೂ ಶಾಲೆಗೆ ಬಂದು ಕನಿಷ್ಟ ಒಂದು ಗಂಟೆ ಪಾಠ ಮಾಡಿದರೆ ಆರೋಗ್ಯವೂ ಚೆನ್ನಾಗಿರುತ್ತದೆ ಎಂದರು.
ಈ ಸಂದರ್ಭ ನಿವೃತ್ತ ಶಿಕ್ಷಕಿಯರಾದ ಸುಮಲತಾ ಸುರೇಂದ್ರ ಕಂಬಳಿ ಮತ್ತು ಲಕ್ಷ್ಮೀ ಶ್ರೀನಿವಾಸ ಮೂರ್ತಿ ಇವರಿಗೆ ಸನ್ಮಾನಿಸಿ ವಿದಾಯ ಕೋರಲಾಯಿತು.
ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್.ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಶಾಲೆಗಳ ಸಂಚಾಲಕ ಕಡೆಂಜ ಸೋಮಶೇಖರ್ ಚೌಟ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ರಾವ್, ನಿವೃತ್ತ ಮುಖ್ಯಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್, ನಥಾಲಿಯನ್ ಎಡ್ವರ್ಡ್ ಐಮನ್, ಆಡಳಿತ ಮಂಡಳಿ ಕಾರ್ಯದರ್ಶಿ ರಾಜ್ ಕುಮಾರ್ ಶೆಟ್ಟಿ ಮಂಚವುದಡಿ ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರ್ ಆಡಳಿತ ಮಂಡಳಿಯ ಸದಸ್ಯರಾದ ದುರ್ಗಾಪ್ರಸಾದ್ ರೈ ಕಲ್ಲಾಯಿ, ಜಗಜೀವನ್ ಶೆಟ್ಟಿ ಕಡೆಂಜ, ಬಲರಾಜ್ ಶೆಟ್ಟಿ ಪೋಡಾರು,ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀಮತಿ ಸುಷ್ಮಾ, ಶಿಕ್ಷಣ ಸಯ್ಯೋಜಕರಾದ ಶ್ರೀಮತಿ ಅನ್ನಪೂರ್ಣ , ಅಮಿತ ಟೀಚರ್, ಕೋಟ್ರಗುತ್ತು ಕೃಷ್ಣ ಪ್ರಸಾದ್ ಆಳ್ವ,ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ, ಸಮಾಜ ಸೇವಕರಾದ ಅಬೂಬಕ್ಕರ್, ಶ್ರೀಮತಿ ಅನಿತಾ ಜಯಂತ್, ಸಂಕ್ರಾಂತ್ ಕಂಬಳಿ, ವಿಕ್ರಾಂತ್ ಕಂಬಳಿ, ಶ್ರೀಮತಿ ಅನುಷಾ ಗುರುಮೂರ್ತಿ ಅಮ್ಮಣ್ಣಾಯ, ಶ್ರೀಮತಿ ಅನನ್ಯ ರವಿರಾಜ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ರೈ ಸ್ವಾಗತಿಸಿದರು. ಶಿಕ್ಷಕಿಯರಾದ ಶ್ರೀಮತಿ ಪ್ರೇಮಲತಾ ಮತ್ತು ಶ್ರೀಮತಿ ಉಷಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ನಾಗೇಂದ್ರ ವಂದಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
